Ration card aplication : ಹೊಸ ರೇಷನ್ ಕಾರ್ಡ್ ಅರ್ಜಿ ಯಾವಾಗ ಪ್ರಾರಂಭ, ರೇಷನ್ ಕಾರ್ಡ್ ತಿದ್ದುಪಡಿ ಶುರು !
ನಮಸ್ಕಾರ ಸ್ನೇಹಿತರೆ ಇಂದಿನ ಹೊಸ ಸುದ್ದಿಗೆ ಸ್ವಾಗತ. ಕರ್ನಾಟಕದಲ್ಲಿ ಹಲವಾರು ಕುಟುಂಬಗಳು ರೇಷನ್ ಕಾರ್ಡ್ ಅರ್ಜಿ ಹಾಕಲು ಕಾಯುತ್ತಿದ್ದಾರೆ. ಈ ಲೇಖನದಲ್ಲಿ ಈ ಪ್ರಶ್ನೆಗೆ ಉತ್ತರ ಸಿಗುತ್ತದೆ ಮತ್ತು ರೇಷನ್ ತಿದ್ದುಪಡಿ ಮಾಡುವ ಕುರಿತು ಮಾಹಿತಿ ಸಿಗುತ್ತದೆ. ಆದ್ದರಿಂದ ಈ ಸುದ್ದಿಯನ್ನು ಸಂಪೂರ್ಣವಾಗಿ ನೋಡಿ ರೇಷನ್ ಕಾರ್ಡ್ ಕುರಿತ ಪ್ರತಿಯೊಂದು ಮಾಹಿತಿಯನ್ನು ಪಡೆಯಿರಿ.
ಹೌದು ಸ್ನೇಹಿತರೆ ಈಗಾಗಲೇ ರೇಷನ್ ಕಾರ್ಡ್ ತಿದ್ದುಪಡಿ (Ration card aplication) ಮಾಡಲು ಮತ್ತು ರೇಷನ್ ಕಾರ್ಡ್ ಅಲ್ಲಿ ಹೊಸ ಸದಸ್ಯರನ್ನು ಸೇರ್ಪಡೆ ಮಾಡಲು ಅಂದರೆ ಹೊಸದಾಗಿ ಮದುವೆಯಾದವರು, ಹುಟ್ಟಿದ ಮಕ್ಕಳು ಸೇರ್ಪಡೆ ಮಾಡುವುದು ಆರಂಭವಾಗಿದೆ. ರೇಷನ್ ಕಾರ್ಡ್ ಅನ್ನು ಯಾರು ತಿದ್ದುಪಡಿ ಮಾಡಬಹುದು ಮತ್ತು ತಿದ್ದುಪಡಿ ಮಾಡಲು ದಾಖಲೆಗಳೇನು ಬೇಕು ಹಾಗೂ ತಿದ್ದುಪಡಿ ಮಾಡುವುದು ಹೇಗೆ ಎಂಬ ವಿವರವಾದ ಮಾಹಿತಿ ಇಲ್ಲಿ ಕೆಳಗೆ ನೀಡಲಾಗಿದೆ.
ಕೃಷಿ ಯಂತ್ರ ಉಪಕರಣಗಳ ಖರೀದಿಗೆ ಸರ್ಕಾರದಿಂದ ಸಬ್ಸಿಡಿ ಹಣ ಪಡೆಯಲು ಇಲ್ಲಿ ಅರ್ಜಿ ಹಾಕಿರಿ !
ರೇಷನ್ ಕಾರ್ಡ್ ತಿದ್ದುಪಡಿ (Ration card aplication) :
ಹಲವಾರು ಕುಟುಂಬಗಳು ಹೊಸದಾಗಿ ಸದಸ್ಯರನ್ನು ಸೇರ್ಪಡೆ ಮಾಡಲು ಮತ್ತು ರೇಷನ್ ಕಾರ್ಡ್ ಅಲ್ಲಿ ಇರುವ ತಪ್ಪುಗಳನ್ನು ತಿದ್ದುಪಡಿ ಮಾಡಲು ಕಾಯುತ್ತಿವೆ. ಈ ಎಲ್ಲದಕ್ಕೂ ಸರಕಾರ ಅವಕಾಶ ನೀಡಿದೆ. ಈ ತಿದ್ದುಪಡಿಯ ದಿನಾಂಕ ಎಲ್ಲಿಂದ, ಎಲ್ಲಿಯ ತನಕ ಇಲ್ಲಿ ತಿಳಿಯಿರಿ.
ರೇಷನ್ ಕಾರ್ಡ್ ತಿದ್ದುಪಡಿ (ಪಡಿತರ ಚೀಟಿ) ಮಾಡಲು ಈ ತಿಂಗಳು ಅಂದರೆ 31 ಜುಲೈ 2025 ರ ತನಕ ಆಹಾರ ಇಲಾಖೆ ಅವಕಾಶ ನೀಡಿದೆ. ಆದ್ದರಿಂದ 31 ನೆಯ ತಾರೀಖಿನ ಒಳಗೆ ಪಡಿತರ ಚೀಟಿ ತಿದ್ದುಪಡಿ ಮಾಡಿಕೊಳ್ಳಿ. ಅದಕ್ಕೇ ಬೇಕಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ಪಡಿತರ ಚೀಟಿಯಲ್ಲಿ ಏನೇನು ತಿದ್ದುಪಡಿ ಮಾಡಬಹುದು ?
- ಹೊಸದಾಗಿ ಸದಸ್ಯರನ್ನು ಸೇರ್ಪಡೆ ಮಾಡಬಹುದು
- ಕಾರ್ಡ್ ಮುಖ್ಯಸ್ಥರ ಬದಲಾಯಿಸಬಹುದು
- ಸದಸ್ಯರನ್ನು ತೆಗೆದು ಹಾಕಬಹುದು
- ನ್ಯಾಯಬೆಲೆ ಅಂಗಡಿ ಚೇಂಜ್ ಮಾಡಬಹುದಾ
- ಏನಾದರೂ ತಪ್ಪಾಗಿದ್ದರೆ ತಿದ್ದುಪಡಿ ಮಾಡಬಹುದು
ರೇಷನ್ ಕಾರ್ಡ್ ಸೇರ್ಪಡೆಗೆ ಬೇಕಾಗುವ ದಾಖಲೆಗಳು :
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- 6 ವರ್ಷದ ಮಕ್ಕಳಿಗೆ ಜನನ ಪತ್ರ
- ರೇಷನ್ ಕಾರ್ಡ್
ರೇಷನ್ ಕಾರ್ಡ್ ತಿದ್ದುಪಡಿ ಮಾಡುವುದು ಹೇಗೆ ?
ನೀವು ನಿಮ್ಮ ಹತ್ತಿರದ ಯಾವುದೇ ಆನ್ಲೈನ್ ಅಂದರೆ ಕಂಪ್ಯೂಟರ್ ಸೆಂಟರ್ ಗಳಿಗೆ ಭೇಟಿ ನೀಡಿ, ಮೇಲಿನ ದಾಖಲೆಗಳ ಕೊಟ್ಟು ಸುಲಭವಾಗಿ ತಿದ್ದುಪಡಿ ಮಾಡಬಹುದು. 31 ನೆಯ ತಾರೀಖಿನ ಒಳಗೆ ತಿದ್ದುಪಡಿ ಮಾಡಿಕೊಳ್ಳಿ.
ಹೊಸ ರೇಷನ್ ಕಾರ್ಡ್ ಅರ್ಜಿ ಯಾವಾಗ ಆರಂಭ ?
ನಮಗೆಬ್ಸಿಕ್ಕ ಮಾಹಿತಿಯ ಪ್ರಕಾರ ಸದ್ಯದಲ್ಲಿ ಹೊಸ ಪಡಿತರವ್ಚಿತಿಗೆ ಯಾವುದೇ ಅವಕಾಶಗಳು ಇಲ್ಲಿ, ಆದರೆ ಈ ತಿದ್ದುಪಡಿ ಮುಗಿದ ನಂತರ, ಮುಂದಿನ ತಿಂಗಳು ಕಾಡು ನೋಡಬೇಕಿದೆ.
ಈ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇನೆ. ಇದೆ ತರಹದ ಇನ್ನು ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಮಾಡಿಕೊಳ್ಳಿ.