New ration card aplication : ಹೊಸ ಪಡಿತರ ಚೀಟಿ ಪಡೆಯಲು ಅರ್ಜಿ ಆರಂಭ, ತಕ್ಷಣ ಇಲ್ಲಿ ಅರ್ಜಿ ಹಾಕಿ !
ಸ್ನೇಹಿತರೆ ನಾವು ಪ್ರತಿ ದಿನ ಹೇಳುತ್ತಲೇ ಬರೋ ಹಾಗೆ ಹೊಸ ಪಡಿತರ ಚೀಟಿಯನ್ನು ಪಡೆಯಲು ರಾಜ್ಯದಲ್ಲಿ ಹಲವಾರು ಅರ್ಹ ಕುಟುಂಬಗಳು ವರ್ಷಗಳಿಂದ ಕಾಯುತ್ತಿವೆ. ಇಂತಹ ಅರ್ಹ ಕುಟುಂಬದ ನಾಗರಿಕರಿಗೆ ಹೊಸ ಪಡಿತರ ಚೀಟಿ ಪಡೆಯಲು ಅರ್ಜಿ ಆರಂಭ ಆಗಿದೆ ಎಂದು ಆಹಾರ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ ಪ್ರಕಟಣೆ ಹೊರಡಿಸಿದೆ. ಆದ್ದರಿಂದ ಇಂಥವರು ತಕ್ಷಣ ಹೊಸ ರೇಷನ್ ಕಾರ್ಡ್ (New ration card aplication) ಪಡೆಯಲು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಕುರಿತ ಪ್ರತಿಯೊಂದು ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ ಅದನ್ನು ಸಂಪೂರ್ಣವಾಗಿ ನೋಡಿಕೊಂಡು ತಕ್ಷಣ ಅರ್ಜಿ ಹಾಕಿ.
ರೇಷನ್ ಕಾರ್ಡ್ ಪಡೆಯುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಯೋಗದಲ್ಲಿ ನೀಡುತ್ತಿರುವ ಹಿಂದುಳಿದ ಕುಟುಂಬಗಳಿಗೆ ನೀಡಲಾಗುವ ರಾಷ್ಟ್ರೀಯ ಆಹಾರ ಪದಾರ್ಥ ಯೋಜನೆ ಅಡಿಯಲ್ಲಿ ಸಬ್ಸಿಡಿತರದಲ್ಲಿ ಆಹಾರ ಧಾನ್ಯಗಳನ್ನು ಪಡೆಯಬಹುದಾಗಿದೆ. ಆದ್ದರಿಂದ ಪ್ರತಿಯೊಂದು ಬಡ ಕುಟುಂಬಗಳು ಕೂಡ ಪಡಿತರ ಚೀಟಿಗೆ ಅರ್ಜಿ ಹಾಕಿ ಕಾರ್ಡ್ ಪಡೆದುಕೊಂಡು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು. ಈ ಪಡಿತರ ಚೀಟಿಗೆ ಅರ್ಜಿ ಹಾಕಲು ಬೇಕಾಗುವ ದಾಖಲೆಗಳು, ಯಾರೆಲ್ಲಾ ಅರ್ಜಿ ಹಾಕಬಹುದು ಮತ್ತು ಹೇಗೆ ಅರ್ಜಿ ಹಾಕಬೇಕು ಅನ್ನುವ ಪ್ರತಿಯೊಂದು ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ರೈಲ್ವೆ ಇಲಾಖೆಯಲ್ಲಿ 30,000 ಹೆಚ್ಚು ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ ಅರ್ಜಿ ಹಾಕಲು ಇಲ್ಲಿ ಒತ್ತಿ !
ಹೊಸ ಪಡಿತರ ಚೀಟಿಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು
- ಅರ್ಜಿ ಹಾಕುವ ಕುಟುಂಬವು ಕರ್ನಾಟಕದ ನಿವಾಸಿಯಾಗಿರಬೇಕು
- ಅರ್ಜಿ ಹಾಕುವ ಕುಟುಂಬವು ಆರ್ಥಿಕವಾಗಿ ಹಿಂದುಳಿದರಬೇಕು
- ಸರ್ಕಾರಿ ವಲಯದ ಉದ್ಯೋಗಗಳಲ್ಲಿ ಕೆಲಸ ಮಾಡುವವರು ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರು ಇರುವುದಿಲ್ಲ.
- ಅರ್ಜಿ ಹಾಕುವವರು 7 ಎಕರೆಗಿಂತ ಹೆಚ್ಚಿನ ಭೂಮಿಯನ್ನು ಹೊಂದಿರಬಾರದು ಎಂದು ಆಹಾರ ಇಲಾಖೆಯು ತಿಳಿಸಿದೆ.
ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ದಾಖಲೆಗಳೇನು ಬೇಕು
- ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
- ವೋಟರ್ ಐಡಿ (ಇದ್ದರೆ)
- ಅರ್ಜಿ ಹಾಕುವ ಕುಟುಂಬದ ಆದಾಯ ಪ್ರಮಾಣ ಪತ್ರ
- ಅರ್ಜಿದಾರರ ಪಾಸ್ಪೋರ್ಟ್ ಅಳತೆ ಫೋಟೋ
- ಫೋನ್ ನಂಬರ್
ಹೊಸ ಪಡಿತರ ಚೀಟಿಗೆ ಅರ್ಜಿ ಹಾಕುವುದು ಹೇಗೆ ?
ಹೊಸ ಪಡಿತರ ಚೀಟಿಗೆ ಅರ್ಜಿ ಹಾಕಿ ಕಾರ್ಡು ಪಡೆಯಲು ಮೇಲೆ ನೀಡಿದ ಎಲ್ಲಾ ದಾಖಲೆಗಳನ್ನು ಸಿದ್ದ ಪಡಿಸಿಕೊಂಡು ನಿಮ್ಮ ಹತ್ತಿರದಲ್ಲಿರುವ ಯಾವುದಾದರೂ ಆನ್ಲೈನ್ ಕಂಪ್ಯೂಟರ್ ಸೆಂಟರ್ ಅಂದರೆ ಬೆಂಗಳೂರು ಒನ್, ಕರ್ನಾಟಕ ಒನ್, CSC ಸೆಂಟರ್ ಈ ಸೆಂಟರ್ ಗಳಲ್ಲ್ಲಿ ಆನ್ಲೈನ್ ನಲ್ಲಿ ಮಾತ್ರ ಅರ್ಜಿ ಹಾಕಲು ಆಹಾರ ಇಲಾಖೆಯು ಅರ್ಹ ಕುಟುಂಬಗಳಿಗೆ ಅವಕಾಶವನ್ನು ಒದಗಿಸಿಕೊಟ್ಟಿದೆ.
ಹೊಸ ಪಡಿತರ ಚೀಟಿ ಅರ್ಜಿ ಸ್ಥಿತಿ ಚೆಕ್ ಮಾಡುವುದು ಹೇಗೆ ?
ಹೊಸ ಪಡಿತರ ಚೀಟಿ ಅರ್ಜಿ ಹಾಕಿದ್ದರೆ, ಅರ್ಜಿಯ ಸ್ಥಿತಿಯನ್ನು ಚಾಪ್ ಮಾಡಲು ಆಹಾರ ಸರಬರಾಜು ಇಲಾಖೆಯ ಅಧಿಕೃತ ವೆಬ್ಸೈಟ್ ಆದ https://ahara.kar.nic.in/ ಗೆ ಭೇಟಿ ನೀಡಿ ಅರ್ಜಿಯ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಬಹುದು.
ಹೊಸ ರೇಷನ್ ಕಾರ್ಡ್ ಪಡೆಯುವುದರ ಲಾಭಗಳು ಏನು ?
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನೀಡುವ ಹಲವಾರು ಹೊಸ ಹೊಸ ಯೋಜನೆಗಳ ಲಾಭವನ್ನು ರೇಷನ್ ಕಾರ್ಡ್ ಇರುವವರು ಪಡೆಯಬಹುದು.
ಸಬ್ಸಿಡಿ ದರದಲ್ಲಿ ಆಹಾರ ಧಾನ್ಯಗಳನ್ನು ರೇಷನ್ ಕಾರ್ಡ್ ಇರುವವರು ಪಡೆಯಬಹುದು
ಯಶಸ್ವಿನಿ ಕಾರ್ಡ್ ಪಡೆಯಬಹುದು
ಕರ್ನಾಟಕದಲ್ಲಿ ಇರುವವರು ಗ್ಯಾರಂಟಿ ಯೋಜನೆಗಳ ಲಾಭ ಪಡೆಯಬಹುದು
- ಹೆಚ್ಚಿನ ಮಾಹಿತಿ ಇಲ್ಲಿ ಪಡೆಯಿರಿ – ahara.kar.nic.in
- ಸಹಾಯವಾಣಿ – 1800-425-9339
ಇದೇ ರೀತಿಯ ಇನ್ನು ಹಲವಾರು ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಮಾಧ್ಯಮಕ್ಕೆ ಭೇಟಿ ನೀಡಿ ಮತ್ತು ವಾಟ್ಸಾಪ್ ಗ್ರೂಪ್ ಜಾಯಿನ್ ಮಾಡಿಕೊಳ್ಳಿ.