Krushi yantra yojane 2025 : ಕೃಷಿ ಯಂತ್ರಗಳ ಖರೀದಿಗೆ ಸರ್ಕಾರದಿಂದ 50% ಸಬ್ಸಿಡಿ ಹಣವನ್ನು ಪಡೆಯಿರಿ, ಅರ್ಜಿ ಹಾಕಲು ಇಲ್ಲಿ ಒತ್ತಿ !
ಸ್ನೇಹಿತರೆ ನಮ್ಮ ಮಾಧ್ಯಮದ ಮತ್ತೊಂದು ಅತಿ ಮುಖ್ಯ ಒಳ್ಳೆಯತನಕ್ಕೆ ತಮಗೆ ಸ್ವಾಗತ. ನಮ್ಮೆಲ್ಲರಿಗೂ ತಿಳಿದಿರುವ ಹಾಗೆ ಸರ್ಕಾರವು ದೇಶದಲ್ಲಿನ ಕೃಷಿಗೆ ಕೃಷಿಗೆ ಅತಿ ಹೆಚ್ಚಿನ ಮಹತ್ವವನ್ನು ಇತ್ತೀಚಿನ ದಿನಗಳಲ್ಲಿ ನೀಡುತ್ತಾ ಬರುತ್ತಿದೆ. ಹಲವಾರು ರೈತ ಸಹಕಾರಿ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅಂತಹ ಯೋಜನೆಗಳಲ್ಲಿ ಒಂದಾ ಕೃಷಿ ಯಂತ್ರ ಯೋಜನೆಯ ಬಗ್ಗೆ ಈ ಲೇಖನದಲ್ಲಿ ಮಾಹಿತಿಯನ್ನು ನಿಮಗೆ ತಲುಪಿಸುತ್ತಿದ್ದೇನೆ.
ಈ ಕೃಷಿ ಯಂತ್ರ ಯೋಜನೆಯ (Krushi yantra yojane 2025) ಮುಖಾಂತರ ಕೃಷಿಯಲ್ಲಿ ತೊಡಗಿಕೊಂಡಿರುವ ರೈತರಿಗೆ ಕೃಷಿಗೆ ಅನುಕೂಲವಾಗುವಂತಹ ಮತ್ತು ಕೃಷಿಯಲ್ಲಿ ಬಳಕೆ ಆಗುವಂತಹ ವಿವಿಧ ಯಂತ್ರಗಳ ಖರೀದಿ ಸರ್ಕಾರವು ಆರ್ಥಿಕ ನೆರವು ನೀಡಬೇಕು ಅನ್ನುವ ಉದ್ದೇಶದಿಂದ ಈ ಕೃಷಿ ಯಂತ್ರ ಯೋಜನೆ ಅಡಿಯಲ್ಲಿ ಇಂತಹ ಯಂತ್ರಗಳ ಖರೀದಿಗೆ 50% ಸಬ್ಸಿಡಿ ಹಣವನ್ನು ರೈತರಿಗೆ ನೀಡುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಅವಕಾಶವನ್ನು ಕೈಬಿಡದೆ ಎಲ್ಲರೂ ಈ ಯೋಜನೆಯ ಲಾಭವನ್ನು ಪಡೆಯಬೇಕು ಅನ್ನುವ ಕಾರಣ ಅದಕ್ಕೆ ಬೇಕಾಗುವ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.
ಕುರಿ ಮತ್ತು ಮೇಕೆ ಖರೀದಿ ಹಾಗೂ ಶೆಡ್ ನಿರ್ಮಾಣಕ್ಕೆ ಸರ್ಕಾರದಿಂದ ಸಬ್ಸಿಡಿ ಹಣ ಪಡೆಯಲು ಇಲ್ಲಿ ಅರ್ಜಿ ಹಾಕಿರಿ !
ಕೃಷಿ ಯಂತ್ರ ಯೋಜನೆ :
ಸ್ನೇಹಿತರೆ ಸರ್ಕಾರವು ರೈತರಿಗೆ ಆರ್ಥಿಕವಾಗಿ ಯಂತ್ರಗಳ ತೆರಿಗೆ ನೆರವು ನೀಡಬೇಕು ಅನ್ನುವ ಉದ್ದೇಶದಿಂದ ಈ ಯೋಜನೆ ಜಾರಿಗೆ ಬಂದಿದೆ. ಈ ಯೋಜನೆಯ ಪ್ರಮುಖ ಉದ್ದೇಶವೆಂದರೆ ರೈತರಿಗೆ ಕೃಷಿಯಲ್ಲಿ ಸುಲಭವಾಗಿ ನಿರ್ವಹಣೆ ಮಾಡುವಂತೆ ಸಹಕರಿಸಿ, ರೈತರಿಗೆ ತಮ್ಮ ಖುಷಿಯಲ್ಲಿನ ಆಳುಗಳ ಖರ್ಚು ಕಡಿಮೆ ಮಾಡುವುದರ ಜೊತೆಗೆ ಅತಿ ಹೆಚ್ಚಿನ ಇಳುವರಿಯನ್ನು ಪಡೆಯುವಂತೆ ಮಾಡುವುದರ ಮೂಲಕ ರೈತರನ್ನು ಆರ್ಥಿಕವಾಗಿ ಸದೃಢ ಮಾಡುವ ನೆಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತಂದ ಉದ್ದೇಶವಾಗಿದೆ.
ಯಾವ ರೈತರಿಗೆ ಅರ್ಜಿ ಹಾಕಲು ಅವಕಾಶವಿದೆ :
ಸಾಮಾನ್ಯವಾಗಿ ಎಲ್ಲ ರೈತರು ಈ ಯೋಜನೆಗೆ ಅರ್ಜಿ ಆಗಬಹುದಾಗಿದೆ. ಯೋಜನೆಯ ಅರ್ಜಿ ಹಾಕಲು ಪ್ರಮುಖವಾಗಿ ರೈತರು ತಮ್ಮ ಜಮೀನಿನ ಪಹಣಿಯ ಜೊತೆಗೆ ತಮ್ಮದೇ ಹೆಸರಿನಲ್ಲಿರುವ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಎರಡು ದಾಖಲೆಗಳ ಮೂಲಕ ಸುಲಭವಾಗಿ ಕೃಷಿ ಯಂತ್ರ ಯೋಜನೆಗೆ ಅರ್ಜಿ ಹಾಕಬಹುದಾಗಿದೆ. ಇತರ ದಾಖಲೆಗಳು ಹೀಗಿವೆ.
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಪಹಣಿ
- 100 ರೂ. ಸ್ಟ್ಯಾಂಪ್
ಯಾವ ಯಂತ್ರಗಳು ಇಲ್ಲಿ ಪಡೆಯಬಹುದು :
ಒಟ್ಟಿನಲ್ಲಿ ಕೃಷಿಯಲ್ಲಿ (Krushi yantra yojane 2025) ಬಳಕೆಯಾಗುವ ಪ್ರತಿಯೊಂದು ಯಂತ್ರ ಉಪಕರಣಗಳನ್ನು ಈ ಯೋಜನೆಯ ಮೂಲಕ ಸಬ್ಸಿಡಿ ಹಣದಲ್ಲಿ ಪಡೆಯಬಹುದಾಗಿದೆ ಅದರಲ್ಲಿ ಪ್ರಮುಖವಾದ ಕೆಲವು ಹೀಗಿವೆ.
- ಡೀಸೆಲ್ ಪಂಪ್ಸೆಟ್
- ಪವರ್ ಸ್ಪ್ರಯೇರ್
- ಮೇವು ಕತ್ತರಿಸುವ ಯಂತ್ರ
- ಬತ್ತದ ಒಕ್ಕಣೆ ಯಂತ್ರ
- ಜೋಳದ ಒಕ್ಕಣೆ ಯಂತ್ರ
- ರೋಟವೇಟರ್
- ಪವರ್ ಟಿಲ್ಲರ್
- ಮೆಣಸಿನ ಕಾಯಿ ಪುಡಿ ಯಂತ್ರ
ಈ ಎಲ್ಲಾ ಯಂತ್ರಗಳನ್ನು ಸಹ 50% ಸಬ್ಸಿಡಿ ಹಣ ನೀಡುವ ಮೂಲಕ ಸರ್ಕಾರದಿಂದ ಪಡೆಯಬಹುದಾಗಿದೆ.
ಕೃಷಿ ಯಂತ್ರ ಯೋಜನೆಗೆ ಅರ್ಜಿ ಹಾಕುವುದು ಹೇಗೆ?
ಸ್ನೇಹಿತರೆ ಯೋಜನೆಗೆ ಅರ್ಜಿ ಹಾಕಲು ನೀವು ನಿಮ್ಮ ಸಮೀಪದ ಕೃಷಿ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಮೇಲೆ ದಾಖಲಿಸಲಾದ ಡಾಕುಮೆಂಟ್ಸ್ ಗಳನ್ನು ತೆಗೆದುಕೊಂಡು ಸುಲಭವಾಗಿ ಅರ್ಜಿ ಹಾಕಬಹುದು ಆಗಿದೆ.