HDFC scholarship apply : 1 ರಿಂದ 12 ನೆಯ ತರಗತಿ ವಿಧ್ಯಾರ್ಥಿಗಳಿಗೆ 75,000 ತನಕ ಸ್ಕಾಲರ್ಷಿಪ್ !
ನಮ್ಮ ದೇಶದಲ್ಲಿ ಶಿಕ್ಷಣ ಪ್ರತಿಯೊಬ್ಬರ ಹಕ್ಕು ಆಗಿದ್ದರು, ಶಿಕ್ಷಣ ಮುಂದುವರೆಸಲು ಆಗುವ ಆರ್ಥಿಕ ಅನನುಕೂಲತೆಗಳು ಹಲವಾರು ಮಕ್ಕಳಿಗೆ ಶಿಕ್ಷಣ ಪಡೆಯುವಲ್ಲಿ ವಂಚಿತರನ್ನಾಗಿಸುತ್ತವೆ. ಈ ಸಮಸ್ಯೆಯನ್ನು ಪರಿಹರಿಸುವ ಉದ್ದೇಶದಿಂದ ನಮ್ಮ ಸರ್ಕಾರಗಳು ಮಾತ್ರವಲ್ಲದೆ ನಮ್ಮ ದೇಶದ ಹಲವು ಪ್ರತಿಷ್ಠಿತ ಸಂಸ್ಥೆಗಳು ಸಹ ಸಹಕರಿಸಿ ಈ ಸಮಸ್ಯೆ ಪರಿಹರಿಸುವಲ್ಲಿ ಮುಂದಾಗಿವೆ. ಅಂತಹ ಸಂಸ್ಥೆಗಳಲ್ಲಿ ಈ HDFC ಸಂಸ್ಥೆ ಕೂಡ ಒಂದಾಗಿದೆ.
ಹೌದು ಸ್ನೇಹಿತರೆ ಮೇಲೆ ತಿಳಿಸಿದ ಹಾಗೆ HDFC ಸಂಸ್ಥೆ ದೇಶದಲ್ಲಿನ ಬಡ ವಿದ್ಯಾರ್ಥಿಗಳಿಗೆ ಅವರ ಶಿಕ್ಷಣ ಮುಂದುವರೆಸುವಲ್ಲಿ ಹಲವಾರು ರೀತಿಯಲ್ಲಿ ಸಹಾಯಾಸ್ತವನ್ನು ನೀಡುತ್ತದೆ.ಅದರಲ್ಲಿ ಈ HDFC ಬ್ಯಾಂಕ್ ನಡೆಸುವ ಪರಿವರ್ತನ್ ಎಜುಕೇಶನಲ್ ಸ್ಕಾಲರ್ಷಿಪ್ (HDFC scholarship apply) ಕೂಡ ಒಂದಾಗಿದೆ. ಈ ಸ್ಕಾಲರ್ಷಿಪ್ ಯೋಜನೆಯ ಮೂಲಕವೇ 1 ರಿಂದ 12 ನೆಯ ತರಗತಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ 75,000 ತನಕ ವಿಧ್ಯಾರ್ಥಿ ವೇತನವನ್ನು ಒದಗಿಸಿಕೊಡಲಾಗುತ್ತಿದೆ. ಈ hdfc ಸ್ಕಾಲರ್ಷಿಪ್ ಯೋಜನೆಗೆ ಹೇಗೆ ಅರ್ಜಿ ಹಾಕಬೇಕು ಎಂದು ಇಲ್ಲಿ ತಿಳಿಯೋಣ ಬನ್ನಿ.
ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಆರಂಭವಾಗಿದೆ, ಅರ್ಜಿ ಹಾಕುವ ಕೊನೆಯ ದಿನಾಂಕ ಇಲ್ಲಿ ತಿಳಿಯಿರಿ !
HDFC ಪರಿವರ್ತನ್ ಸ್ಕಾಲರ್ಷಿಪ್ (HDFC scholarship apply) :
HDFC ಸಂಸ್ಥೆಯು ದೇಶದಲ್ಲಿನ ಓದುವ ಆಸಕ್ತಿ ಇರುವ ಕೌಶಲ್ಯಯುತ ಮತ್ತು ಆರ್ಥಿಕವಾಗಿ ಬಡ, ಓದಲು ಆರ್ಥಿಕ ಸಮಸ್ಯೆಗೆ ಒಳಗಾದ ಮಕ್ಕಳಿಗೆ ಆರ್ಥಿಕ ನೆರವು ನೀಡುವ ಮೂಲಕ ಇಂತಹ ಮಕ್ಕಳಿಗೆ ನೇರವಾಗಿ ಅವರು ಉನ್ನತ ಶಿಕ್ಷಣವನ್ನು ಪಡೆಯುವಲ್ಲಿ ಮುಂದಾಗಲಿ ಅನ್ನುವ ಉದ್ದೇಶದಿಂದ ಈ ಸ್ಕಾಲರ್ಷಿಪ್ ಯೋಜನೆ ಜಾರಿಗೆ ತರಲಾಗಿದೆ. 2015-26 ನೆಯ ಸಾಲಿನಲ್ಲಿ ಈ ಯೋಜನೆಗೆ ಅರ್ಜಿ ಹಾಕಲು ಆಸಕ್ತಿ ಇರುವ ಮಕ್ಕಳಿಂದ ಈಗಾಗಲೇ ಅರ್ಜಿ ಕರೆಯಲಾಗಿದೆ. ನೀವು ತಕ್ಷಣ ಇಲ್ಲಿ ಅರ್ಜಿ ಹಾಕಬಹುದು.
ಯಾರು ಯೋಜನೆಗೆ ಅರ್ಜಿ ಸಲ್ಲಿಸಬಹುದು ?
- 1 ರಿಂದ 12 ನೆಯ ತರಗತಿಯಲ್ಲಿ ಓದುತ್ತಿರುವ ಎಲ್ಲಾ ಮಕ್ಕಳು ಅರ್ಜಿ ಹಾಕಬಹುದು
- ಮಗುವಿನ ಕುಟುಂಬವು 2.5 ಲಕ್ಷಕ್ಕಿಂತ ಕಡಿಮೆ ಆದಾಯವನ್ನು ಹೊಂದಿರಬೇಕು.
- ವಿದ್ಯಾರ್ಥಿಯು ಪ್ರಸ್ತುತ ಓದಿನಲ್ಲಿ ಮುಂದುವರೆಯುತ್ತಿರಬೇಕು, ಓದು ನಿಲ್ಲಿಸಬಾರದು
ಸಹಾಯ ಧನದ ವಿವರ :
- 1 ರಿಂದ 6 ನೆಯ ತರಗತಿ – 15,000
- 7 ರಿಂದ 12 ನೆಯ ತರಗತಿ – 18,000
- ಡಿಪ್ಲೊಮೊ, ITI ಓದುವವರು – 25,000
- ಪದವಿ ಓದುವವರು – 30,000
- ಸ್ನಾತಕೋತ್ತರ ಪದವಿ – 35,000 ರಿಂದ 75,000
ಬೇಕಾಗುವ ದಾಖಲೆಗಳು :
- ವಿದ್ಯಾರ್ಥಿಯು ಆಧಾರ್ ಕಾರ್ಡ್
- ಹಿಂದಿನ ವರ್ಷದ ಮಾರ್ಕ್ಸ್ ಕಾರ್ಡ್
- ಪ್ರಸ್ತುತ ಓದುತ್ತಿರುವ ಪ್ರಮಾಣ ಪತ್ರ
- ಬ್ಯಾಂಕ್ ಖಾತೆ
- ಪಾಸ್ ಪೋರ್ಟ್ ಅಳತೆ ಫೋಟೋ
- ಕುಟುಂಬದ ಆದಾಯ ಪ್ರಮಾಣ ಪತ್ರ
ಸ್ಕಾಲರ್ಷಿಪ್ ಗೆ ಅರ್ಜಿ ಹಾಕುವುದು ಹೇಗೆ ?
ಕೆಳಗೆ ಈ HDFC ಪರಿವರ್ತನ್ ಸ್ಕಾಲರ್ಷಿಪ್ ಗೆ ಅರ್ಜಿ ಹಾಕಲು ಬೇಕಾಗುವ ಅಧಿಕೃತ ಲಿಂಕ್ ನೀಡಲಾಗಿದೆ. ಅದರ ಮೇಲೆ ಒತ್ತಿ, ಅಲ್ಲಿ ಎಲ್ಲಾ ವಿವರಗಳನ್ನು ಭರ್ತಿ ಮಾಡಿ ನಂತರ ಅರ್ಜಿಯನ್ನು ಪೂರ್ಣಗೊಳಿಸಿರಿ.
ಈ ಲಿಂಕ್ ಮೇಲೆ ಒತ್ತಿ ನೀವು ಆನ್ಲೈನ್ ಮೂಲಕವೇ ಸುಲಭವಾಗಿ hdfc ಪರಿವರ್ತನ್ ಸ್ಕಾಲರ್ಷಿಪ್ (HDFC scholarship apply) ಗೆ ಅರ್ಜಿ ಹಾಕಬಹುದು. ನಮ್ಮ ಮಾಧ್ಯಮಕ್ಕೆ ದಿನ ಭೇಟಿ ನೀಡಿ, ವಿವಿಧ ಮಾಹಿತಿ ಪಡೆದುಕೊಳ್ಳಿ ಧನ್ಯವಾದಗಳು.