Caste income certificate : ಆದಾಯ ಪ್ರಮಾಣ ಪತ್ರ ಅರ್ಜಿ ಹಾಕುವುದು ಹೇಗೆ? ಇದರಿಂದ ಲಾಭಗಳೇನು?
ನಮ್ಮ ದೇಶದಲ್ಲಿ ಎಲ್ಲಾ ಯೋಜನೆಗಳು ಅಥವಾ ಐಡೆಂಟಿಟಿ ಮುಂತಾದ ವಿಷಯಗಳಿಗಾಗಿ ಸರ್ಕಾರವು ನಾಗರಿಕರಿಗೆ ಹಲವಾರು ರೀತಿಯ ಪ್ರಮಾಣ ಪತ್ರಗಳನ್ನು ನೀಡುತ್ತವೆ. ಅದರಲ್ಲಿ ಈ ಆದಾಯ ಪ್ರಮಾಣ ಪತ್ರ ಸಹ ಒಂದು ಪ್ರಮುಖ ದಾಖಲೆಯಾಗಿದೆ. ಈ ಆದಾಯ ಪ್ರಮಾಣ ಪತ್ರ ಪಡೆಯುವುದರ ಮೂಲಕ ಸರಕಾರದಿಂದ ನೀಡಲಾಗುವ ವಿವಿಧ ಯೋಜನೆಗಳ ಲಾಭ, ಸ್ಕಾಲರ್ಷಿಪ್ ಗಳ ಲಾಭ ಮತ್ತು ವಿವಿಧ ಹುದ್ದೆಗಳು, ಯೋಜನೆಗಳಲ್ಲಿ ಮೀಸಲಾತಿಯನ್ನು ಕೆಲವು ನಿರ್ದಿಷ್ಟ ವರ್ಗದ ಜನರು ಪಡೆಯಬಹುದು.
ಹೌದು ಈ ಎಲ್ಲಾ ಲಾಭ ಪಡೆಯಲು ನಾವು ಆದಾಯ ಪ್ರಮಾಣ ಪತ್ರ (Caste income certificate) ಹೊಂದಿರುವುದು ಕಡ್ಡಾಯವಾಗಿದೆ. ಹಾಗಾದರೆ ಈ ಆದಾಯ ಪ್ರಮಾಣ ಪತ್ರವನ್ನು ಅರ್ಜಿ ಹಾಕಲು ಯಾರು ಅರ್ಹರು ಮತ್ತು ಆದಾಯ ಪ್ರಮಾಣ ಪತ್ರ ಅರ್ಜಿ ಹಾಕುವುದು ಹೇಗೆ? ಇಲ್ಲಿ ತಿಳಿಯಿರಿ. ಸಂಪೂರ್ಣ ಮಾಹಿತಿ ಓದಿ ನಂತರ ಅರ್ಜಿ ಹಾಕಿರಿ. ಹಾಗೆ ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೆ ಇದನ್ನು ಶೇರ್ ಮಾಡಿಕೊಳ್ಳಿ.
HDFC ಸ್ಕಾಲರ್ಷಿಪ್ ಗೆ ಅರ್ಜಿ ಹಾಕಿ, ಯೋಜನೆ ಲಾಭ ಪಡೆಯಲು ಇಲ್ಲಿ ಒತ್ತಿರಿ !
ಆದಾಯ ಪ್ರಮಾಣ ಪತ್ರದ ಉಪಯೋಗಗಳು?
ಇದು ಸರ್ಕಾರವು ಎಲ್ಲಾ ನಾಗರಿಕರಿಗೂ ನೀಡುವ ಒಂದು ಅಧಿಕೃತ ದಾಖಲೆಯಾಗಿದೆ. ಇದರಿಂದ ಆ ನಾಗರಿಕರನ ಮತ್ತು ಅವನ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ತಿಳಿದುಕೊಳ್ಳಬಹುದು. ಇದರಿಂದ ಸಿಗುವ ಉಪಯೋಗಗಳು ಹೀಗಿವೆ.
- ವಿಧ್ಯಾರ್ಥಿ ವೇತನ ಪಡೆಯಬಹುದು
- ಶೈಕ್ಷಣಿಕ ಅರ್ಜಿಗಳಲ್ಲಿ ಶುಲ್ಕ ವಿನಾಯಿತಿ
- ಹುದ್ದೆಗಳಲ್ಲಿ ಮೀಸಲಾತಿ
- ಸರ್ಕಾರಿ ಯೋಜನೆಗಳ ಸಬ್ಸಿಡಿ ಉಪಯೋಗ
ಯಾರು ಅರ್ಜಿ ಹಾಕಬಹುದು?
ಕರ್ನಾಟಕದಲ್ಲಿನ ಪ್ರತಿಯೊಬ್ಬ, ಅಂದರೆ ಯಾವುದೇ ವಯಸ್ಸಿನವರು ಸಹ ಸೂಕ್ತ ದಾಖಲೆಗಳ ಮಾಹಿತಿಯೊಂದಿಗೆ ಆದಾಯ ಪ್ರಮಾಣ ಪತ್ರ ಪಡೆಯಲು ಅರ್ಜಿ ಹಾಕಬಹುದು.
ಅಗತ್ಯ ದಾಖಲೆಗಳು ಏನು?
ಆದರೆ ಕಾರ್ಡ್ ( ಗುರುತಿನ ಪುರಾವೆ)
ವಿಳಾಸ ಪ್ರಮಾಣ ಪತ್ರ
ವಯಸ್ಸಿನ ಪ್ರಮಾಣ ಪತ್ರ ( ಜನನ / ಶಾಲಾ ದಾಖಲೆ)
ಪಾಸ್ಪೋರ್ಟ್ ಅಳತೆ ಫೋಟೋ
ಆನ್ಲೈನ್ ಮೂಲಕ ಅರ್ಜಿ ಹಾಕುವದು ಹೇಗೆ?
ಈ ಅಧಿಕೃತ https://nadakacheri.karnataka.gov.in ನಾಡಕಛೇರಿ ವೆಬ್ ಸೈಟ್ ಭೇಟಿ ನೀಡಿ.
Apply online ಅನ್ನುವುದರ ಮೇಲೆ ಒತ್ತಿ, ನಿಮ್ಮ ಮೊಬೈಲ್ ನಂಬರ್ ಹಾಕಿ OTP ಪಡೆದು, ಲಾಗಿನ್ ಆಗಿರಿ.
Income certificate ಅನ್ನುವ ಆಯ್ಕೆ ಆಯ್ದುಕೊಳ್ಳಿ.
ನಂತರ ಅಲ್ಲಿ ಕೇಳಲಾದ ಎಲ್ಲಾ ವಿವರ ಭರ್ತಿ ಮಾಡಿ, ಕೇಳಿದ ದಾಖಲೆಗಳನ್ನು ಅಪ್ಲೋಡ್ ಮಾಡಿ.
ನಂತರ ₹15 ರೂ. ಅನ್ನು ಅರ್ಜಿ ಶುಲ್ಕ ಪಾವತಿಸಿ.
ಕೊನೆಗೆ ಅರ್ಜಿ ಸಲ್ಲಿಸಿ, ಸ್ವೀಕೃತಿ ಸಂಖ್ಯೆ ಪಡೆಯಿರಿ.( ಇದೆ ಸಂಖ್ಯೆಯಿಂದ ಮುಂದೆ certificate ಡೌನ್ಲೋಡ್ ಮಾಡಿಕೊಳ್ಳಬೇಕು)
ಆದಾಯ ಪ್ರಮಾಣ ಪತ್ರ ಡೌನ್ಲೋಡ್ ಮಾಡುವುದು ಹೇಗೆ?
ಮೇಲೆ ನೀಡಿದ ನಾಡಕಛೇರಿ ವೆಬ್ ಸೈಟ್ ಭೇಟಿ ನೀಡಿ.
ನಂತರ ಅಲ್ಲಿ ಸರ್ಟಿಫಿಕೇಟ್ ವೇರಿಫಿಕೇಷನ್ (certificate verification) ಆಯ್ಕೆ ಮೇಲೆ ಒತ್ತಿರಿ.
ಸ್ವೀಕೃತಿ ಸಂಖ್ಯೆಯನ್ನು ನಮೂದಿಸಿ
ಇದಾದಮೇಲೆ show verification ಮೇಲೆ ಒತ್ತಿ , ಪ್ರಮಾಣ ಪತ್ರ ನೋಡಿ, ಡೌನ್ಲೋಡ್ ಮಾಡಿಕೊಳ್ಳಿ.
ಇದೆ ರೀತಿಯ ಇನ್ನು ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಮಾಡಿಕೊಳ್ಳಿ. ಕೆಳಗೆ ಲಿಂಕ್ ನೀಡಲಾಗಿದೆ.
WhatsApp group join link
https://whatsapp.com/channel/0029VaAq9xgIN9inUgJyS50O